ನಿರತನಾಗಿರು ಕರ್ಮದಲಿ ಫಲದಾಸೆಯಿಲ್ಲದೆ l
ಫಲವು ಹಲವಲ್ಲ ಕರ್ಮವು ಹಲವು ll
ನಿರತನಾಗಿರು ಕಾರ್ಯದಲಿ ಪರಿತಾಪವಿಲ್ಲದೆ l
ಫಲವು ಸ್ಥಿರವಲ್ಲ ಕರ್ಮವು ನಿತ್ಯವು ll
ನಿರತನಾಗಿರು ಕರ್ತವ್ಯದಲಿ ಸ್ವಾರ್ಥವಿಲ್ಲದೆ l
ಫಲವು ನಿನ್ನದಲ್ಲ ಕರ್ಮವೇ ಸತ್ಯವು ll
ನಿರತನಾಗಿರು ನಿರಂತರ ಕಲಿಕೆಯಲಿ l
ಫಲವು ಸುಖವಲ್ಲ ಕರ್ಮವೇ ಸಾಧನವು ll
ನಿರತನಾಗಿರು ಸಮಾಧಾನ ಪ್ರಜ್ಞೆಯಲಿ l
ಫಲವು ನಗಣ್ಯ ಕರ್ಮವೇ ಗುರುವು ll
ನಿರತನಾಗಿರು ಪಸರಿಸಲು ಶಾಂತಿಯನು l
ಫಲವು ಜಗದೊಡೆಯನಿಗೆ ಕರ್ಮವೆನಗಿರಲಿ ll
ಓಂ ಶಾಂತಿ
We use cookies to analyze website traffic and optimize your website experience. By accepting our use of cookies, your data will be aggregated with all other user data.